ದಿನಾಂಕ 29/11/2025, ಶನಿವಾರ.

ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ, ಬೆಂಗಳೂರು ಇದರ ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಪಟ್ಟಂತೆ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿ ಪರಿಶೀಲನೆಯಾಗಿ, ಚುನಾವಣೆ ಚಿಹ್ನೆ ಹಂಚಿಕೆ ಮಾಡಿ ಚುನಾವಣೆ ನಿಗದಿಯಂತೆ ದಿನಾಂಕ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ಮತ್ತು ನಿಯಮಗಳ ಚೌಕಟ್ಟಿನಲ್ಲಿ ಸಂಘದ ಆಡಳಿತ ಮಂಡಳಿ ಚುನಾವಣೆ ಜರುಗಿಸಲು ಚುನಾವಣೆ ಕ್ಯಾಲೆಂಡರ್ ವೇಳಾಪಟ್ಟಿ ಪ್ರಕಟಿಸಿದ್ದು, ಆ ಪ್ರಕಾರ ಅಭ್ಯರ್ಥಿಗಳು ಮತ್ತು ಮತದಾರರು ಚುನಾವಣೆ ವೇಳಾ ಪಟ್ಟಿಯಂತೆ ಇಂದು ದಿನಾಂಕ 29/11/2025 ರಂದು ಮತದಾನದ ದಿನಾಂಕವಾಗಿದ್ದು. ಮತದಾನ ನಡೆಯುವ ಸ್ಥಳವಾದ ಬಾಲಭವನ ಕಬ್ಬನ್ ಉದ್ಯಾನವನ ಆವರಣ ಬೆಂಗಳೂರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭ್ಯರ್ಥಿಗಳು, ಮತದಾರರು ಆಗಮಿಸಿದ್ದರು.

ಆದರೆ ಮತದಾರರು ಮತ್ತು ಅಭ್ಯರ್ಥಿಗಳಿಗೆ ಆ ಸ್ಥಳದಲ್ಲಿ ಯಾವುದೇ ರೀತಿಯಾದಂತಹ ಚುನಾವಣೆ ಪ್ರಕ್ರಿಯೆ ನಡೆಯದ ಕಾರಣ ಅಭ್ಯರ್ಥಿಗಳು ಆಘಾತಕ್ಕಿಡಾಗಿದ್ದಾರೆ. ಮತದಾನ ಮುಂದುಡಿರುವುದಾಗಿ ಮುಂಚಿತವಾಗಿ ಯಾವುದೇ ಸರಿಯಾದ ಮಾಹಿತಿ ನೀಡದೆ ಮತದಾನದ ದಿನವೇ ಅಂದರೆ 29/11/2025ರಂದು ರಿಟರ್ನಿಂಗ್ ಅಧಿಕಾರಿಗಳು ತಿಳಿಸಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಅಭ್ಯರ್ಥಿಗಳಿಗೆ ಮತ್ತು ಶೇರುದಾರರಿಗೆ ತೊಂದರೆ ಆಗಿದೆ, ಕೇವಲ ನಿನ್ನೆಯಷ್ಟೆ ಚಾಲನೆಗೊಂಡ ಗೃಹ ಲಕ್ಷ್ಮಿ ವಿವಿಧ್ಧೊದ್ದೇಶ ಸಹಕಾರ ಸಂಘ ಬ್ಯಾಂಕ್ ಚುನಾವಣೆ ಇದರಿಂದ ಹಿನ್ನಡೆ ಉಂಟಾಗಿದೆ, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗು ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ಕೂಡಲೇ ಸ್ಪಷ್ಟಿಕರಣ ನೀಡಬೇಕೆಂದು ಅಭ್ಯರ್ಥಿಗಳು ಆಗ್ರಹಿಸಿರುತ್ತಾರೆ.


ಈ ರೀತಿಯ ರಾಜ್ಯ ಸರ್ಕಾರದ ಅನುಮಾನದ ನಡೆಯು ಚುನಾವಣೆ ನಡೆಸದೆ ತಮಗೆ ಬೇಕಾದ ಅಭ್ಯರ್ಥಿಗಳನ್ನು ಅಧಿಕಾರದಲ್ಲಿ ಕೂರಿಸಿ ಕೊಳ್ಳೆಹೊಡೆಯುವ ಉದ್ದೇಶ ಇರಬಹುದೆಂದು ಮೇಲ್ನೋಟಕ್ಕೆ ತಿಳಿಯುವುದು.




