ಕಾರ್ಮಿಕರ ಸುದ್ದಿ

*ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರಿಂದ ವಿವಿಧ ಸಭೆ*

ದಿನಾಂಕ 06/11/2025, ಗುರುವಾರ.

ಬೆಂಗಳೂರು, ನವೆಂಬರ್‌ 6: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರು, ಬೆಂಗಳೂರಿನಲ್ಲಿ ವಿವಿಧ ಸಭೆಗಳನ್ನು ನಡೆಸಿದರು.

ಇಎಸ್ಐಸಿ ಪ್ರಗತಿ ಪರಿಶೀಲನಾ ಸಭೆ
ವಿಕಾಸಸೌಧದಲ್ಲಿ ಸಚಿವರು ಇಎಸ್ಐಸಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.

ಈ ಸಭೆಯಲ್ಲಿ ಇಎಸ್ಐಸಿ ಹಾಗೂ ಕಾರ್ಮಿಕ ಆಯುಕ್ತರಾದ ಡಾ. ಎಚ್‌ ಎನ್‌ ಗೋಪಾಲಕೃಷ್ಣ, ಕೇಂದ್ರ ಇಎಸ್ಐಸಿ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಕುಮಾರ್ ಇಎಸ್ಐಸಿ ಆಡಳಿತ ಉಪ ನಿರ್ದೇಶಕ ಡಾ. ವರದರಾಜ್, ಕಾರ್ಯಕ್ರಮ ಉಪ ನಿರ್ದೇಶಕರಾದ ಡಾ. ಸುನಿತಾ ಪಾಲ್ಗೊಂಡಿದ್ದರು.

ಕಾರ್ಮಿಕರ ಸೇವೆಗಳ ವಿವಿದ್ದೋದ್ದೇಶ ಸಹಕಾರ ಸಂಘ: ಉಪ ಸಮಿತಿ ಸಭೆ

ರಾಜ್ಯ ಕಾರ್ಮಿಕರ ಸೇವೆಗಳ ವಿವಿದ್ದೋದ್ದೇಶ ಸಹಕಾರ ಸಂಘ (ಸೊಸೈಟಿ) ಸ್ಥಾಪಿಸುವ ಕುರಿತು ಎಡಡನೇ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಸಚಿವ ಲಾಡ್‌ ಅವರು ಭಾಗವಹಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಭೆಯಲ್ಲಿ ಕಾರ್ಮಿಕ ಆಯುಕ್ತರಾದ ಡಾ. ಎಚ್‌ ಎನ್‌ ಗೋಪಾಲಕೃಷ್ಣ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶೆಟ್ಟಣ್ಣನವರ್, ಕಾನೂನು ಇಲಾಖೆಯ ಕಾರ್ಯದರ್ಶಿಗಳು, ಜಂಟಿ ಕಾರ್ಮಿಕ ಆಯುಕ್ತರಾದ ಡಾ ರವಿಕುಮಾರ್ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button