ಬೆಂಗಳೂರುವಿಜಯನಗರ ವಿಧಾನಸಭಾ ಕ್ಷೇತ್ರ

ಅವಲಹಳ್ಳಿ ಆರ್ಯ ನವೀನ್ ಕಾಂಗ್ರೆಸ್ ಸೇರ್ಪಡೆ.

ದಿನಾಂಕ 02/11/2025. ಭಾನುವಾರ.

ಬೆಂಗಳೂರು ಮಾಜಿ ಸಚಿವರು, ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಅವಲಹಳ್ಳಿ ವಾರ್ಡ್ ನ ಯುವ ಮುಖಂಡರಾದ ಆರ್ಯ ನವೀನ್ ಅವರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು, ಈ ಸಮಯದಲ್ಲಿ ಮಾನ್ಯ ಶಾಸಕರು ಮಾತನಾಡುತ್ತಾ ಅರ್ಯ ನವೀನ್ ಈ ಮೊದಲು ನಮ್ಮ ಪಕ್ಷದಲ್ಲೇ ಇದ್ದವರು ಅವರಿಗೆ ನಮ್ಮ ಪಕ್ಷದ ಸಿದ್ಧಾಂತ ತಿಳಿದಿದೆ, ಅವರು ಕೆಲ ಕಾರಣದಿಂದ ಬಿಜೆಪಿ ಪಕ್ಷದ ಕಡೆ ವಾಲಿದರು ಆ ಪಕ್ಷದ ಬಗ್ಗೆ ಅರಿತು, ನಮ್ಮ ಪಕ್ಷದ ಸಿದ್ಧಾಂತವೆ ರಾಜಕಾರಣದಲ್ಲಿ ಬೆಳವಣಿಗೆಗೆ ದಾರಿ ಎಂದು ತಿಳಿದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ವಾಪಸಾಗಿದ್ದಾರೆ ಅವರಿಗೆ ವಾರ್ಡ್ ಮಟ್ಟದಲ್ಲಿ ರಾಜಕಾರಣದ ಜೀವನದಲ್ಲಿ ಯಶಸ್ಸು ಸಿಗಲಿ ಎಂದರು. ನಂತರ ಮಾತನಾಡಿದ ಆರ್ಯ ನವೀನ್ ಅವರು ನಾನು ಎರಡು ಪಕ್ಷವನ್ನು ನೋಡಿದ್ದೇನೆ ಸ್ವತಂತ್ರವಾಗಿ ಕೆಲಸ ಮಾಡಲು ಮಾನ್ಯ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ಅವರ ಆಶೀರ್ವಾದ ಮುಖ್ಯ ಹಾಗೆ ಅವರ ಪಕ್ಷ ನಿಷ್ಠೆ, ಯೋಜನೆಗಳು, ಆಲೋಚನೆಗಳು ನಮಗೆ ಸ್ಫೂರ್ತಿ, ಮುಂದಿನ ದಿನಮಾನಗಳಲ್ಲಿ ಅವರ ನೇತೃತ್ವದಲ್ಲಿ ಪಕ್ಷದ ಪರವಾಗಿ ಅವಲಹಳ್ಳಿ ವಾರ್ಡ್ ನಲ್ಲಿ ಸಾರ್ವಜನಿಕರ ಕುಂದುಕೊರತೆ ನಿವಾರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button