ಸುದ್ದಿ

ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆ:

*ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆ: ಆಯೋಗದಿಂದ ಮಹತ್ವದ ಸೂಚನೆರಾಜ್ಯದಾದ್ಯಂತ 5,700ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ 5 ವರ್ಷಗಳ ಅಧಿಕಾರ ಅವಧಿ ಡಿಸೆಂಬರ್ 2025 ರಿಂದ ಜನವರಿ 2026 ರೊಳಗೆ ಮುಗಿಯಲಿರುವುದರಿಂದ, ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿ ಚುನಾವಣೆಗಳ ಸಿದ್ಧತೆ ಆರಂಭಿಸಿದೆ.

ಆಯುಕ್ತ ಅರುಂಧತಿ ಚಂದ್ರಶೇಖ‌ರ್ ಅವರು ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು, ಅವಧಿ ಮುಗಿಯುತ್ತಿರುವ ಗ್ರಾಮ ಪಂಚಾಯಿತಿಗಳ ವಿವರಗಳನ್ನು ಅಕ್ಟೋಬರ್ 24 ರೊಳಗೆ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ. ಈ ದತ್ತಾಂಶವು ಚುನಾವಣಾ ವೇಳಾಪಟ್ಟಿ ಮತ್ತು ಮತದಾರರ ಪಟ್ಟಿ ನವೀಕರಣಕ್ಕೆ ಸಹಕಾರಿಯಾಗಲಿದೆ.

Related Articles

Leave a Reply

Your email address will not be published. Required fields are marked *

Back to top button