ಸುದ್ದಿ

ಎಲ್ಲಾ ಸಮುದಾಯದವರು ಸ್ವಯಂ ಪ್ರೇರಿತರಾಗಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಅವರವರ ಸಾಮಾಜಿಕ, ಶೈಕ್ಷಣಿಕ ಹಕ್ಕು ಪಡೆಯುವಂತೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ. ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ ಕಾನೂನು ಕಾರ್ಯದರ್ಶಿಗಳಾದ ಹರೀಶ್ ಕುಮಾರ್ ಅವರ ಅಭಿಮತ.

ದಿನಾಂಕ 26/09/2025

ನಮ್ಮ ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವ ಸಮುದಾಯಗಳ ಸಮೀಕ್ಷೆಗಳನ್ನು ನಡೆಸುವ ಕುರಿತು ಸರ್ಕಾರಗಳು ಹಲವು ಬಾರಿ ಪ್ರಯತ್ನಿಸಿದರು ಸಹ ಸಾಧ್ಯವಾಗಿರುವುದಿಲ್ಲ ಹಾಗಾಗಿ ನಮ್ಮ ಕಾಂಗ್ರೆಸ್ ಪಕ್ಷ ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೊದಲು ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ಭರವಸೆಯಂತೆ ಪ್ರಸ್ತುತ ಹಿಂದುಳಿದ ಜಾತಿಗಳ ಸಮೀಕ್ಷೆಯನ್ನು ಈಗ ಕೈಗೊಂಡಿರುವುದು ಸ್ವಾಗತಾರ್ಹ. ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಈ ಸಮೀಕ್ಷೆ ಕುರಿತು ಎಲ್ಲಾ ಸಮುದಾಯದವರು ಸ್ವಯಂ ಪ್ರೇರಿತರಾಗಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಅವರವರ ಸಾಮಾಜಿಕ, ಶೈಕ್ಷಣಿಕ ಹಕ್ಕು ಪಡೆಯುವಂತೆ ಆದೇಶ ನೀಡಿರುತ್ತದೆ ಮತ್ತು ಈ ಸಮೀಕ್ಷೆಯಲ್ಲಿನ ವರದಿಯನ್ನು ಗೌಪ್ಯವಾಗಿಡಲು ಹಿಂದುಳಿದ ವರ್ಗಗಳ ಆಯೋಗಕ್ಕೆ ನಿರ್ದೇಶಿಸಿರುತ್ತದೆ. ನಮ್ಮ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆಗಳನ್ನು ಯಾವ ಸಂದರ್ಭದಲ್ಲಿ ಕೈಗೊಂಡರು ಸಹ ಕಾಣದ ಕೈಗಳ ಕೈವಾಡದಿಂದ ಅವುಗಳ ವರದಿಗಳು ಜಾರಿಗೆ ಬರಲು ಸಾಧ್ಯವಾಗಿರುವುದಿಲ್ಲ

ಆದರೆ ಪ್ರಸ್ತುತ ಹಿಂದುಳಿದ ವರ್ಗಗಳ ಆಯೋಗವು ಒಂದು ಸ್ವತಂತ್ರ ಸ್ವಯತ್ತ ಸಂಸ್ಥೆಯಾಗಿ ವೈಜ್ಞಾನಿಕ ರೀತಿಯಲ್ಲಿ ಈ ಸಮೀಕ್ಷೆ ನಡೆಸುತ್ತಿರುವುದರಿಂದ ನಮ್ಮ ರಾಮನಗರ ಜಿಲ್ಲೆಯಲ್ಲಿನ ಸಮಸ್ತ ನಾಗರಿಕ ಬಂಧುಗಳು ತಮ್ಮ ತಮ್ಮ ಜಾತಿ ಮತ್ತು ಉಪಜಾತಿಗಳನ್ನು ಈ ಸಮೀಕ್ಷೆಯಲ್ಲಿ ನೋಂದಾಯಿಸಿ ಧೈರ್ಯವಾಗಿ ಭಾಗವಹಿಸಿ ನಿಮಗೆ ಮುಂದೆ ಸರ್ಕಾರಗಳಿಂದ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಅಂದರೆ ಸಾಂವಿಧಾನಿಕ ಹಕ್ಕು ಮತ್ತು ಪ್ರಯೋಜನಗಳನ್ನು ಪಡೆಯಲು ಇದು ತುಂಬಾ ಸಹಕಾರಿಯಾಗಿರುತ್ತದೆ. ಇದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಈ ಸಮೀಕ್ಷೆ ಯನ್ನು ಯಶಸ್ವಿಯಾಗಿ ಮಾಡಲು ಪ್ರತಿಜ್ಞೆ ಮಾಡಿರುವುದರಿಂದ ಹಿಂದುಳಿದ ನಾವೆಲ್ಲರೂ ಅವರೊಂದಿಗೆ ಕೈಜೋಡಿಸ ಬೇಕೆಂಬುದು ನಮ್ಮ ಮನವಿ. ಈ ಸಮೀಕ್ಷೆಯ ಕುರಿತು ಅಪಪ್ರಚಾರ ಮಾಡುವ ಯಾವುದೇ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಮಾನ್ಯ ವಕೀಲರಾದ, ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ ಕಾನೂನು ಕಾರ್ಯದರ್ಶಿಗಳಾದ ಹರೀಶ್ ಕುಮಾರ್ ಸುಗ್ಗನಹಳ್ಳಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button