ಸುದ್ದಿ

DCM ಡಿ ಕೆ ಶಿವಕುಮಾರ್ ಅವರ ಮುಂದೆ ವೇದಿಕೆಯಲ್ಲಿ ಗುಡುಗಿದ ಹಿಂದುಳಿದ ವರ್ಗದ ಹಿರಿಯ ನಾಯಕರು ಹಾಗೂ ವಿಧಾನ ಪರಿಷತ್ ನ ಮಾಜಿ ಸಭಾಪತಿಗಳಾದ ವಿ ಆರ್ ಸುದರ್ಶನ್ ರವರು

ರಾಮನಗರ : ದಿನಾಂಕ 19/09/2025 ರಂದು ನಡೆದ ದಿ|| ಶ್ರೀ ಡಿ ದೇವರಾಜು ಅರಸು ಅವರ 110 ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಗುಡುಗಿದ ಮಾಜಿ ಸಭಪತಿಯಾದ ವಿ ಆರ್ ಸುದರ್ಶನ್ ರವರು.

ಬೆಂಗಳೂರು ದಕ್ಷಿಣ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ ರಿ. ವತಿಯಿಂದ ಆಯೋಜಿಸಿದ್ದ ದಿ|| ಶ್ರೀ ಡಿ ದೇವರಾಜು ಅರಸು ಅವರ 110 ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸರ್ಕಾರಗಳು ಎಲ್ಲಾ ಹಿಂದುಳಿದ ವರ್ಗದ ಜನರಿಗೆ ನಿಯಮಾನುಸಾರ ಉದ್ಯೋಗ, ಶೈಕ್ಷಣಿಕ ಕ್ಷೇತ್ರದಲ್ಲಿ ನ್ಯಾಯ ಒದಗಿಸಬೇಕು, ಜಾತಿ ಸಮೀಕ್ಷೆ ಮಾಡುವಾಗ ಪ್ರಿಲಿಮಿನರಿ ನೋಟಿಫಿಕೇಶನ್ ಮಾಡಬೇಕು ಒಂದು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತ್ ಮಾಡಬೇಕಾದರೆ ಸ್ಥಳೀಯ ಜನರ, ನಾಯಕರ ಅಭಿಪ್ರಾಯ ಸಂಗ್ರಹಿಸಬೇಕು ಹಾಗೆಯೇ ಹಿಂದುಳಿದ ವರ್ಗದ ಜಾತಿಗಳನ್ನು ಸಮೀಕ್ಷೆ ಮಾಡಬೇಕಾದರೆ ಪ್ರಿಲಿಮಿನರಿ ನೋಟಿಫಿಕೇಶನ್ ಮಾಡಿ ಜನರ ಅಭಿಪ್ರಾಯ ಸಂಗ್ರಹಣೆ ಅಧಿಕೃತವಾಗಿ ಮಾಡಿ ನಂತರ ಜಾತಿ ಸಮೀಕ್ಷೇ ಮಾಡಬೇಕು , ಸುಮನ್ನೇ ಜನರಿಗೆ ಗೊಂದಲ ಸೃಷ್ಟಿ ಮಾಡಬಾರದು ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು, ಜಾತಿ ಸಮೀಕ್ಷೆ ಮಾಡುವ ವಿಚಾರದಲ್ಲಿ ಗೊಂದಲಗಳಿಗೆ ತೆರೆಹೆಳೆಯಬೇಕು ಇಲ್ಲವಾದರೆ ಗೊಂದಲದ ಜಾತಿ ಸಮೀಕ್ಷೆಯಿಂದ ಸಣ್ಣ ಪ್ರಮಾಣದಲ್ಲಿ ಇರುವ ಸಮುದಾಯಗಳಿಗೆ ನ್ಯಾಯ ಸಿಗುವುದಿಲ್ಲ ಹಾಗಾಗಿ ಸರ್ಕಾರ ಜಾತಿ ಸಮೀಕ್ಷೆ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು DCM ಡಿ ಕೆ ಶಿವಕುಮಾರ್ ಅವರ ಮುಂದೆ ವೇದಿಕೆಯಲ್ಲಿ ಹಿಂದುಳಿದ ವರ್ಗದ ಹಿರಿಯ ನಾಯಕರು ಹಾಗೂ ವಿಧಾನ ಪರಿಷತ್ ನ ಮಾಜಿ ಸಭಾಪತಿಗಳಾದ ವಿ ಆರ್ ಸುದರ್ಶನ್ ರವರು ಗುಡುಗಿದರು.

ನಂತರ ಮಾತನಾಡಿದ ಮಾನ್ಯ ಉಪ ಮುಖ್ಯಮಂತ್ರಿಗಳು ಡಿ ಕೆ ಶಿವಕುಮಾರ್ ಅವರು ವಿ ಆರ್ ಸುದರ್ಶನ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು, ಅವರ ಈ ಅಭಿಪ್ರಾಯವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button