ಸುದ್ದಿ
ಗಿಲ್ಗೆ ಮತ್ತೊಂದು ಐಸಿಸಿ ಪ್ರಶಸ್ತಿ: ಯಾರೂ ಮಾಡದ ಸಾಧನೆ ಮಾಡಿದ ಕ್ಯಾಪ್ಟನ್

ಐಸಿಸಿಯ ಮತ್ತೊಂದು ಪ್ರಶಸ್ತಿಗೆ ಗೆದ್ದ ಶುಭಮನ್ ಗಿಲ್, ಯಾರೂ ಮಾಡದ ಸಾಧನೆ ಮಾಡಿದ ಕ್ಯಾಪ್ಟನ್
ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರ ಪ್ರದರ್ಶನಕ್ಕೆ ಮತ್ತೊಂದು ಫಲ ಸಿಕ್ಕಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಗಿಲ್, ಆಂಡರ್ಸನ್, ತೆಂಡೂಲ್ಕರ್ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಗಿಲ್ ಮುಡಿಗೆ ಮತ್ತೊಂದು ಐಸಿಸಿ ಪ್ರಶಸ್ತಿ ಗರಿ ಸಂದಿದೆ. ಇದರೊಂದಿಗೆ ಐಸಿಸಿ ಈ ಪ್ರಶಸ್ತಿಯನ್ನು 4 ಬಾರಿ ತಮ್ಮದಾಗಿಸಿಕೊಂಡ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.



