ಸುದ್ದಿ

ಚುನಾವಣೆಗೆ ಡೆಡ್ ಲೈನ್, 15 ದಿನಗಳ ಗಡುವು ನೀಡಿದ ಸುಪ್ರೀಂ.

ಸುಮಗ ಆಡಳಿತಕ್ಕಾಗಿ ಬಿಬಿಎಂಪಿ ಬದಲಾಗಿ ಗ್ರೇಟ‌ರ್ ಬೆಂಗಳೂರು ಪ್ರಾಧಿಕಾರದ (GBA) ಅಸ್ತಿತ್ವಕ್ಕೆ ಬಂದಿದ್ದು, ಇದರ ಅಡಿಯಲ್ಲಿ ಬರುವ ಐದು ಪಾಲಿಕೆಗಳ ಕ್ಷೇತ್ರಗಳನ್ನು ಪುನ‌ರ್ ವಿಂಗಡಣೆಗೆ ಮಾಡಿ ಅಂತಿಮ ಅಧಿಸೂಚನೆ ಪ್ರಕಟಿಸಲು ರಾಜ್ಯಕ್ಕೇ (Supreme Court) 15 ದಿನಗಳ ಕಾಲಾವಕಾಶ ನೀಡಿದೆ.

ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರದ ಪರವಾಗಿ ಅಭಿಷೇಕ್ ಮನು ಸಿಂಫ್ಟಿ ಮತ್ತು ಅಡ್ವಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ವಾದ ಮಂಡನೆ ಮಾಡಿದ್ದಾರೆ. ರಾಜ್ಯದಲ್ಲಿ ಜಾತಿ ಗಣತಿಗಾಗಿ ಅಧಿಕಾರಿಗಳನ್ನು ನೇಮಿಸಿದ್ದರಿಂದ ಕ್ಷೇತ್ರ ಪುನ‌ರ್ ವಿಂಗಡಣೆ ಪ್ರಕ್ರಿಯೆ ಅಧಿಸೂಚನೆ ಪ್ರಕಟಿಸಲಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ನವೆಂಬರ್ 3 ರಂದು ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆದಿತ್ತು. ಜಿಬಿಎ ಚುನಾವಣೆ ಕುರಿತಂತೆ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ ನಡೆಸಿತ್ತು. 15 ದಿನದೊಳಗೆ ವಾರ್ಡ್ ಡಿಲಿಮಿಟೇಷನ್‌ ಪಟ್ಟಿ ಪ್ರಕಟಿಸಿ, ಆದಷ್ಟು ಬೇಗ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.ಇನ್ನು ಚುನಾವಣೆ ಕುರಿತಂತೆ ಕಾಂಗ್ರೆಸ್ ಮುಖಂಡ ಶಿವರಾಜು ಅರ್ಜಿ ಸಲ್ಲಿಸಿದ್ದರು. ಶೈಕ್ಷಣಿಕ ಸಮೀಕ್ಷೆ ಇದ್ದಿದ್ದಕ್ಕೆ ವಾರ್ಡ್‌ ಪಟ್ಟಿ ಪ್ರಕಟಿಸಲು ಸಾಧ್ಯವಾಗಲಿಲ್ಲ. ಇದೀಗ ಸಮೀಕ್ಷೆ ಮುಗಿದಿದ್ದು, 15 ದಿನದೊಳಗೆ ಪಟ್ಟಿ ಪ್ರಕಟವಾಗಲಿದೆ. ಡಿಸೆಂಬರ್ 15 ರೊಳಗೆ ಮಿಸಲಾತಿ ಪಟ್ಟಿ ಸಿದ್ದವಾಗುತ್ತದೆ. ವಾರ್ಡ್ ಮೀಸಲಾತಿ ಪಟ್ಟಿ ಸಿದ್ಧವಾದ ಬಳಿಕ ಎಲೆಕ್ಷನ್ ನಡೆಸಲು 3 ತಿಂಗಳು ಬೇಕು. ಹೀಗಾಗಿ ಮುಂದಿನ ವರ್ಷ ಏಪ್ರಿಲ್ ಚುನಾವಣೆ ಕುರಿತಂತೆ ಈಗಾಗಲೇ ಎಲೆಕ್ಷನ್ ಕಮಿಷನ್ ಹಿರಿಯ ಅಧಿಕಾರಿಗಳನ್ನು ನೇಮಿಸಿದೆ. ಜಿಲ್ಲಾ ಚುನಾವಣಾಧಿಕಾರಿ, ಅಪರ ಚುನಾವಣಾಧಿಕಾರಿಗಳ ನೇಮಕವಾಗಿದೆ. ಮೀಸಲಾತಿ ಪಟ್ಟಿ ಪ್ರಕಟ ಆಗುತ್ತಿದ್ದಂತೆ ಎಲೆಕ್ಷನ್ ಪ್ರಕ್ರಿಯೆಗಳು ಆರಂಭವಾಗಲಿವೆ. ಎಲೆಕ್ಷನ್ ಪ್ರಕ್ರಿಯೆ ಮುಗಿಸಲು ಚುನಾವಣಾ ಆಯೋಗಕ್ಕೆ ಮುರು ತಿಂಗಳು ಬೇಕು. ಮಾರ್ಚ್‌ನಲ್ಲಿ ಪರೀಕ್ಷೆಗಳು ಇರುವುದರಿಂದ ಏಪ್ರಿಲ್ ನಲ್ಲಿ ಎಲೆಕ್ಷನ್ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button