ಸುದ್ದಿ

ಬೆಂಗಳೂರಿನಲ್ಲಿ ಅತೀ ಹೆಚ್ಚು ಅಕ್ರಮ ಕಟ್ಟಡ, ಅಧಿಕಾರಿಗಳಿಂದ ಸ್ಥಳೀಯ ಶಾಸಕರ ಹೆಸರು ದುರ್ಬಳಕೆ, ಕ್ರಮ ಕೈಗೊಳ್ಳದೇ ಕಳ್ಳಾಟ.

ಪ್ರೀಯ ಓದುಗರೇ,
ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು, ಈ ನಮ್ಮ ಬೆಂಗಳೂರಿನಲ್ಲಿ ಎಲ್ಲಾ ವರ್ಗದ ಜನ ವಾಸಿಸುತ್ತಿದ್ದಾರೆ, ಬೆಂಗಳೂರು ನಗರವು ವಿಧಾನಸೌಧ, ಹೈ ಕೋರ್ಟ್, ಲಾಲ್ಬಾಗ್, ಕಬ್ಬನ್ ಪಾರ್ಕ್, ಚಿನ್ನಸ್ವಾಮಿ ಕ್ರೀಡಾಂಗಣ, ಕಂಠೀರವ ಕ್ರೀಡಾಂಗಣ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಮುಖ್ಯ ಕಛೇರಿಗಳು ಒಳಗೊಂಡಿದೆ ಹಾಗು ಎನ್ನು ಅನೇಕ ಪ್ರವಾಸಿ ಸ್ಥಳ, ದೇವಸ್ಥಾನಗಳು, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣ ಮುಂತಾದ ಸೌಕರ್ಯ ಉಳ್ಳ ಸ್ಥಳಗಳು ಇವೆ. ಇಂತ ನಗರದಲ್ಲಿ ಜನ ಸಾಮಾನ್ಯರು ಮನೆ ನಿರ್ಮಾಣ ಮಾಡಲು ಬಿಬಿಎಂಪಿ (ಜಿ ಬಿ ಎ) ವತಿಯಿಂದ ಕಟ್ಟಡ ನಿರ್ಮಾಣ ಮಂಜೂರಾತಿ ನಕ್ಷೆ ಅನುಮತಿ ಪಡೆದು ಪಾಲಿಸಬೇಕಾಗಿದೆ ಕಾನೂನು,

ಉದಾರಣೆಗೆ – ನಗರ ಯೋಜನಾ ಪ್ರಾಧಿಕಾರದಿಂದ ಕಟ್ಟಡ ನಿರ್ಮಾಣ ಮಂಜೂರಾತಿ ನಕ್ಷೆ, ತಳಪಾಯ ಪರಿಶೀಲನೆ ಪ್ರಮಾಣ ಪತ್ರ, ತೆರಿಗೆ ಪಾವತಿ ರಶೀದಿ, ರೋಡ್ ಕಟಿಂಗ್ ಅನುಮತಿ ಪತ್ರ, ನಿರ್ಮಾಣ ಪರವಾನಿಗೆ ಪತ್ರ, ಪ್ರಾರಂಭಿಕ ಪ್ರಮಾಣ ಪತ್ರ, ಕಂದಾಯ ಪತ್ರ, ಖಾತ ಪ್ರಮಾಣ ಪತ್ರ, ಒಂದು ಮನೆ ನಿರ್ಮಿಸಲು ಬೇಕಾದ ದಾಖಲೆಗಳು, ಅದಲ್ಲದೆ ನಗರ ಯೋಜನೆಯ ಕಟ್ಟಡ ನಿರ್ಮಾಣ ಮಂಜೂರಾತಿ ನಕ್ಷೆ ಪ್ರಕಾರ ಸುತ್ತಳತೆ 2 ಅಡಿಗಳಷ್ಟು ಜಾಗ ಬಿಟ್ಟು ಕಟ್ಟಡ ನಿರ್ಮಿಸಬೇಕು, ನೆಲ ಮಹಡಿ ಒಳಗೊಂಡಂತೆ 3 ಅಂತಸ್ತಿನ ಕಟ್ಟಡಕ್ಕೆ ಮಾತ್ರ ( G +3) ಅನುಮತಿಯ ಪ್ರಮಾಣ ಪತ್ರ ನೀಡಲಾಗಿತ್ತು, ಇವಿಷ್ಟು ಒಂದು ಅಧಿಕೃತ ಕಾನೂನಾತ್ಮಕ ಆರೋಗ್ಯಕರ ಕಟ್ಟಡ ನಿರ್ಮಾಣಕ್ಕೆ ಬೇಕಾದ ದಾಖಲೆಗಳು.

ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಬೆಂಗಳೂರು ನಗರದಲ್ಲಿ ಯಾವುದೇ ಅನುಮತಿ ಇಲ್ಲದೆ ಮತ್ತು ಹೆಚ್ಚು ಅಂತಸ್ತು ಅಥವಾ ಸುತ್ತಳತೆಯ ಜಾಗ ನೀಡದೆ ನಕ್ಷೆಯ ವಿರುದ್ಧವಾಗಿ ಕಟ್ಟಡ ನಿರ್ಮಾಣ ಮಾಡಿರುವ ಅತೀ ಹೆಚ್ಚು ಬೆಂಗಳೂರಿನಲ್ಲೇ. ಈ ವಿಷಯ ಸ್ಥಳೀಯ ಸಂಬಂಧ ಪತ್ರ ಇಲಾಖೆಯ ಅಧಿಕಾರಿಗಳಾದ EE, AE, AEE, ಹಾಗು ಸ್ಥಳೀಯ ವಾರ್ಡ್ ಇನ್ಸ್ಪೆಕ್ಟರ್ ಗಮನದಲ್ಲಿದ್ದರು ಒಂದೆರಡು ನೋಟಿಸ್ ನೀಡಿ ಒಳಗೆ ಅಡ್ಜಸ್ಟ್ ಮಾಡಿಕೊಳ್ಳುತ್ತಾರೆ, ಇವರುಗಳಿಗೆ ಯಾರೇ ದೂರು ನೀಡಿದರು ಕ್ರಮ ಕೈಗೊಳ್ಳದೇ ಕಳ್ಳಾಟ ಆಡುತ್ತಿರುವುದು, ಮಾಹಿತಿ ಕೇಳಿದರೆ ಬೇಕಾ ಬಿಟ್ಟಿ ಉತ್ತರ ನೀಡುವುದು, ದೂರು ನೀಡಿದರೆ ದೂರುದಾರರನ್ನೇ ಎದರಿಸುವುದು ಚಾಳಿ ಆಗಿಬಿಟ್ಟಿದೆ, ಇವರ ಈ ವರ್ತನೆಯಿಂದ ವಾಸ ಮಾಡುವ ಕಟ್ಟಡ ನಾಳೆ ಏನಾದರೂ ಕುಸಿದು ಬಿದ್ದರೆ ಆ ಕಟ್ಟದಲ್ಲಿ ಬಾಡಿಗೆದಾರರು ಜೀವ ಕಳೆದುಕೊಳ್ಳ ಬೇಕಾಗುತ್ತದೆ, ಸುರಕ್ಷ ಕ್ರಮವಿಲ್ಲದೆ, ಕಟ್ಟಿರುವ ಕಟ್ಟಡ ಕುಸಿದರೆ ಹೊಣೆ ಕಡೆಗೆ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ, ಕಟ್ಟಡಕ್ಕೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ, ಸ್ಥಳೀಯ ಶಾಸಕರ ಹೆಸರು ದುರ್ಬಳಕೆ ಮಾಡಿಕೊಂಡು ಒಳ ,ಒಳಗೆ ಕಟ್ಟಡ ಮಾಲೀಕರ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರದ ಸಂಬಳ ಪಡೆದು, ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಸರ್ಕಾರ ಇಂತ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿದರೆ ಸತ್ಯ ಹೊರಬರುತ್ತದೆ.

ಮುಂದುವರಿಯುತ್ತದೆ……………

Related Articles

Leave a Reply

Your email address will not be published. Required fields are marked *

Back to top button