ಸುದ್ದಿ

ಗೃಹ ಲಕ್ಷ್ಮಿ ವಿವಿಧೋದೇಶ ಸಹಕಾರ ಸಂಘ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಮೋಸ.

ಬೆಂಗಳೂರು – ಗೃಹ ಲಕ್ಷ್ಮಿ ವಿವಿಧೋಷ ಸಹಕಾರ ಸಂಘ ಚುನಾವಣೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಉದ್ದೇಶ ಮಾಧ್ಯಮದ ಮೂಲಕ ತಿಳಿಸಿ, ಈಗ ಸಚಿವರ, MLA ಗಳ ಮತ್ತು ಬಕ್ಕೆಟ್ ಹಿಡಿಯುವ ಸ್ಥಳೀಯವಾಗಿ ಮತದಾನ ಮಾಡಲು ಆರ್ಹರಲ್ಲದವರ ಪರ ಪ್ರಭಾವಿ ರಾಜಕಾರಣಿಗಳು ಲಾಬಿ ಮಾಡಿ ನಿಷ್ಠಾವಂತ ಪಕ್ಷದ ಕಾರ್ಯಕರ್ತರಿಗೆ ಮೋಸ ಮಾಡುತ್ತಿರುವುದು ಈಗ ಬೆಳಕಿಗೆ ಬಂದಿದೆ.

ಕರ್ನಾಟಕದ ಎಲ್ಲಾ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಿ ಈಗ ಕೆಲ ನಿಗಮಗಳ, ಸ್ಥಳೀಯ ಸಂಸ್ಥೆಗಳ ಹಾಗು ಗೃಹ ಲಕ್ಷ್ಮಿ ವಿವಿಧೋಷ ಸಹಕಾರ ಸಂಘ ಚುನಾವಣೆಯಲ್ಲಿ, ಕೆಲಸವೇ ಮಾಡದ ಪ್ರಬಲ ಕಾಂಗ್ರೆಸ್ ಪಕ್ಷದ ಸಚಿವರ, ಶಾಸಕರ, ಸಂಬಂದಿಕರಿಗಳಿಗೆ, ಬಕೆಟ್ ಹಿಡಿದುಕೊಂಡು ಇರುವ ಅಭ್ಯರ್ಥಿಗಳಿಗೆ ಮಾತ್ರ ಅವಿರೋಧ ಆಯ್ಕೆ ಪಟ್ಟ ಕಟ್ಟಿ, ಚುನಾವಣೆಯಲ್ಲಿ ಭಾಗವಹಿಸಲು ಆಸಕ್ತರಿರುವ ಅಭ್ಯರ್ಥಿಗಳ ನಾಮಪತ್ರ ಪರಿಗಣಿಸದೆ ಒಳ ಒಳಗೆ ತಮಗೆ ಬೇಕಾದ ಅಭ್ಯರ್ಥಿಗಳ ನಾಮನಿರ್ದೇಶನ ಮಾಡಲು ಪ್ರಭಾವಿಗಳು ಮುಂಚೆಯೇ ಲಾಬಿ ನಡೆಸಿ, ನಿಷ್ಠಾವಂತ ಪಕ್ಷದ ಕಾರ್ಯಕರ್ತರಿಗೆ ಮೋಸ ಮಾಡುವ ಮೂಲಕ ಅಂಗೈಯಲ್ಲಿ ಆಕಾಶ ತೋರಿಸುವ ಕೆಲಸ ಮಾಡಿದ್ದಾರೆ,

ಇಂದು ದಿನಾಂಕ 23/11/2025 ರಂದು ನಾಮಪತ್ರ ವಾಪಸ್ ಪಡೆಯುವ ಕಡೆ ದಿನವಾಗಿದ್ದು ಚುನಾವಣಾ ಅಧಿಕಾರಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಸಿಬಂದಿಗಳು ಇಲಾಖೆಯ ಕೊಠಡಿ ಬೀಗ ಜಡಿದು ಯಾವುದಕ್ಕೂ ಅವಕಾಶ ಕೊಡದೆ, ಚುನಾವಣೆ ನಡೆಸದೆ ಪ್ರಭಾವಿಗಳ ಮೂಲಕ ಕಾರ್ಯಕರ್ತರಿಗೆ ಅವಕಾಶ ಕಸಿದು, ತಮ್ಮವರ ಅಂದರೆ ಸಂಬಂಧಿಕರ, ಬಕೆಟ್ ಗಳ ಅವಿರೋಧ ಆಯ್ಕೆ ಮಾಡಲು ಸಂಚು ರೂಪಿಸಿ ಕಾರ್ಯಕರ್ತರಿಗೆ ಮೋಸ ಮಾಡುತ್ತಿರುವುದು ಇಂದು ಬೆಳಕಿಗೆ ಬಂದಿದೆ.

Related Articles

One Comment

Leave a Reply

Your email address will not be published. Required fields are marked *

Back to top button